ಲಯನ್ಸ ಶಿಕ್ಷಣ ಸಂಸ್ಥೆಯ
ಲಯನ್ಸ ಕನ್ನಡ ಮಾಧ್ಯಮ ಪ್ರೌಢ ಶಾಲೆ
ಲಯನ್ಸ ಕನ್ನಡ ಮಾಧ್ಯಮ ಪ್ರೌಢ ಶಾಲೆ ಹಾಗೂ ಲಯನ್ಸ ಸ್ವತಂತ್ರ ಪದವಿ ಪೂರ್ವ ಕಾಲೇಜ, ನರಗುಂದ ಇವುಗಳ ಕಟ್ಟಡಕ್ಕೆ ರಾಜ್ಯಸಭಾ ಸದಸ್ಯರಾದ ಶ್ರೀ.ಎಸ್.ಆರ್.ಬೊಮ್ಮಾಯಿಯವರ ಇವರ ಪ್ರದೇಶ ಅಭಿವೃದ್ದಿ ಯೋಜನೆಯ ಅನುದಾನ ೫ ಲಕ್ಷ ರೂ ಹಣದಲ್ಲಿ ನಿರ್ಮಾಣಗೊಂಡ ಕಟ್ಟಡವು ದಿನಾಂಕ: ೨೭.೦೧.೨೦೦೪ ರಂದು ಶ್ರೀ.ಎಸ್.ವ್ಹಿ.ಬೋನಗೇರಿಯವರ ಅಧ್ಯಕ್ಷತೆಯಲ್ಲಿ ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ವಿಧಾನಪರಿಷತ್ ಸದಸ್ಯರಿಂದ ಹಾಗೂ ಮುಖ್ಯ ಅತಿಥಿಗಳಾಗಿ ಮಾನ್ಯ ಶ್ರೀ.ಸಿ.ಸಿಪಾಟೀಲರಿಂದ ಉದ್ಘಾಟಿಸಲ್ಪಿಟ್ಟಿತು
ದಿನಾಂಕ:೨೭.೦೧.೨೦೦೯ ರಲ್ಲಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ಪ್ರಯೋಗಾಲಯ ಹಾಗೂ ಗ್ರಂಥಾಲಯದ ಉದ್ಘಾಟನೆಯು ಅಂದಿನ ಶಾಸಕರಾದ ಶ್ರೀ.ಸಿ.ಸಿ.ಪಾಟೀಲರ ಮುಖಾಂತರ ಜರುಗಿತು.
ದಿನಾಂಕ:೨೭.೦೧.೨೦೦೯ ರಲ್ಲಿ ಪದವಿ ಪೂರ್ವ ಕಾಲೇಜಿನ ಶಾಲಾ-ಕಾಲೇಜಿ ಹೆಚ್ಚುವರಿ ಕೊಠಡಿಗಳ ಉದ್ಘಾಟನೆಯು ಅಂದಿನ ಶಾಸಕರಾದ ಶ್ರೀ.ಸಿ.ಸಿ.ಪಾಟೀಲರ ಮುಖಾಂತರ ಜರುಗಿತು.ಅಧ್ಯಕ್ಷತೆಯನ್ನು ಅಂದಿನ ಚೇರಮನ್ನರಾದ ಶ್ರೀ.ಎಸ್.ವ್ಹಿ.ಬೋನಗೆರಿ ಹಾಗೂ ಕಾರ್ಯದರ್ಶಿಗಳಾದ ಶ್ರೀ.ಜಿ.ಎನ್.ಸಾಲಿಯವರು ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ಪ್ರಾಚಾರ್ಯರಾದ ಶ್ರೀ.ಎಸ್.ಜಿ.ಜಕ್ಕಲಿ ಉಪಸ್ಥಿತಿಯಲ್ಲಿ ಜರುಗಿತು.
ಲಯನ್ಸ ಕನ್ನಡ ಮಾಧ್ಯಮ ಪ್ರೌಢ ಶಾಲೆ ಮಂಜುರಾದ ಆದೇಶ ಸಂಖ್ಯೆ ಮತ್ತು ದಿನಾಂಕ ಸಿ ೮(೭) ಶಾ.ಶಿ.ಅ.ಹೊ.ಪ್ರಾ.ಶಾ ೧೩/೨೦೦೦-೨೦೦೧ ದಿನಾಂಕ: ೧೩.೦೬.೨೦೦೧.
ಲಯನ್ಸ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ದಿನಾಂಕ ೩೦-೭-೨೦೦೧ ರಂದು ಸ್ಥಾಪಿತವಾದ ನಮ್ಮ ಲಯನ್ಸ ಕನ್ನಡ ಮಾಧ್ಯಮ ಬಾಲಕಿಯರ ಪ್ರೌಢ ಶಾಲೆಯ ಅನುಮತಿ ಪಡೆದು ೨೮ ವಿದ್ಯಾರ್ಥಿನಿಯರ ದಾಖಲಾತಿ ಹೊಂದಿತ್ತು ೨೦೦೨-೨೦೦೩ ರಲ್ಲಿ ಸಹಶಿಕ್ಷಣ ಸಂಸ್ಥೆಯಾಗಿ ಪರಿವರ್ತನೆಯಾಯಿತು.